Namasthe restaurant BTM LAYOUT BANGALORE ನಮಸ್ತೆ ರೆಸ್ಟೋರೆಂಟ್ ಬಿಟಿಎಂ ಲೇಔಟ್, ಬೆಂಗಳೂರು
ನಮಸ್ಕಾರ ಸ್ನೇಹಿತರೆ ನಾವು ಇವತ್ತು ಊರ್ದಿರ್ಗಾ ಬ್ಲಾಗ್ನಲ್ಲಿ ಒಂದು ಒಳ್ಳೆ ರೆಸ್ಟೋರ್ ರೆಸ್ಟೋರೆಂಟ್ ಬಗ್ಗೆ ನಿಮಗೆ ಮಾಹಿತಿಯನ್ನು ನಿಮಗೆ ತಿಳಿಸಿಕೊಡೋದಕ್ಕೆ ನಾನು ಇಲ್ಲಿ ಬಂದಿದ್ದೇನೆ. ನೀವು ಎಲ್ಲರೂ ಯುಗಾದಿಯನ್ನು ಯಾವತರ ಆಚರಿಸಿದ್ದೀರಾ? ಸ್ವಲ್ಪ ಕಮೆಂಟ್ ಮಾಡಿ
ಬನ್ನಿ ಸ್ನೇಹಿತರೆ ನಾವು ಇವತ್ತು ಬೆಂಗಳೂರಲ್ಲಿ ರೆಸ್ಟೋರೆಂಟ್ ಇರುತ್ತವೆ ಅದು ಯಾವ್ಯಾವು ಅವರ ರೆಸ್ಟೋರೆಂಟ್ ಸ್ಪೆಷಲ್ ಊಟವನ್ನು ನೀಡುತ್ತದೆ ಅದನ್ನು ಟೆಸ್ಟ್ ಮಾಡಬೇಕಂದ್ರೆ ನಾವು ತಪ್ಪದೆ ಅಲ್ಲಿಗೆ ಹೋಗಲೇಬೇಕು ಅನ್ನಿಸುವ ಯೋಚನೆ.
ತುಂಬಾ ಈ ರೆಸ್ಟೋರೆಂಟ್ ಎಲ್ಲಾ ಫುಡ್ ಬ್ಲಾಗರ್ಸ್ ಅನ್ನು ಮತ್ತು ಎಲ್ಲಾ ತಿಂಡಿ ಪ್ರಿಯರನ್ನು ಆಕರ್ಷಿಸುವ ಈ ರೆಸ್ಟೋರೆಂಟ್ ಗೆ ಉಂಟು ಇಷ್ಟೊತ್ತು ನಾವು ಯಾವುದರ ಬಗ್ಗೆ ಮಾತಾಡ್ತಿದೀವಿ ಅಂತ ಹೇಳಲೇ ಇಲ್ವಲ್ಲ. ಅದೇ ಸ್ನೇಹಿತರೆ ನಮಸ್ತೆ ರೆಸ್ಟೋರೆಂಟ್ ಬಿಟಿಎಂ ಲೇಔಟ್ ಬೆಂಗಳೂರು
ಬೋರ್ಡು ನೋಡಿದಿರಲ್ಲ ಸ್ನೇಹಿತರೆ ಇದು ಯಾವ ಮಟ್ಟಿಗೆ ಇದೆ, ಇಲ್ಲಿ ತುಂಬಾ ಫೇಮಸ್ ಆಗಿರುವ ತಿಂಡಿ ದೊರೆಯುತ್ತದೆ ಅದು ಕೂಡ ನಮ್ಮ ಸೌತ್ ಇಂಡಿಯನ್ ತಿಂಡಿ ಅಂದ್ರೆ ತುಂಬಾ ಜನಕ್ಕೆ ಇಷ್ಟ. ಅದಕ್ಕಾಗಿ ರೆಸ್ಟೋರೆಂಟ್ ನಲ್ಲಿ ಎಲ್ಲಾ ತರದ ಅಲ್ಪಹಾರ ಸಂಬಂಧಿತ ಎಲ್ಲಾ ತಿಂಡಿಗಳು ಇಲ್ಲಿ ದೊರೆಯುತ್ತವೆ.
ಮತ್ತೆ ಇವರ ಬ್ರಾಂಚ್ ಗಳು ಎಲ್ಲೆಲ್ಲಿದ್ದಾವೆ ಅಂತ ನೋಡೋಣ ಬನ್ನಿ
- ಬಿಟಿಎಂ ಲೇಔಟ್ ಬೆಂಗಳೂರು
- ಎಚ್ಎಸ್ಆರ್ ಲೇಔಟ್, ಬೆಂಗಳೂರು
- ವಿಜಯನಗರ
ಈ ಮೂರು ಬ್ರಾಂಚ್ ಗಳಲ್ಲಿ ಇವು ಈ ರೆಸ್ಟೋರೆಂಟ್ ಗೆ ತುಂಬಾ ಆಧಾರಣೆ ಇದೆ. ಇಲ್ಲಿಗೆ ಬರುವ ಕಸ್ಟಮರ್ಗಳು ಏನೇನು ಹೇಳುತ್ತಾರೆ ಮತ್ತೆ ಅದು ಎಲ್ಲಾ ನಿಮಗೆ ಪೂರ್ತಿ ತಿಳಿಸುವ ಪ್ರಯತ್ನ ಪಡ್ತೀನಿ ಆದರೆ ಈ ಹೋಟೆಲ್ನಲ್ಲಿ ಏನೇನು ಸಿಗುತ್ತೆ ಅಂತ ನಿಮಗೆ ಪೂರ್ತಿ ತಿಳಿಸಿಕೊಡುತ್ತೇನೆ.
ಮಸಾಲಾ ದೋಸೆ (masala dose)
ಸ್ನೇಹಿತರೆ ನಿಮಗೆ ಈ ಹೋಟೆಲ್ನಲ್ಲಿ ಸ್ಪೆಶಾಲಿ ಏನಪ್ಪಾ ಅಂದ್ರೆ ನಿಮಗೆ ಗೊತ್ತಿರುತ್ತೆ ಸೌತ್ ಇಂಡಿಯಾದಲ್ಲಿ ಇರುವ ಅಲ್ಪಹಾರದಲ್ಲಿ ಮಸಾಲೆ ದೋಸೆ ಅಂದ್ರೆ ಇಷ್ಟ ಆಗಿರೋರು ಯಾರು ಇರಲ್ಲ ಅಂತ ಸ್ಟೈಲಿಶ್ ಇಲ್ಲಿ ದೊರೆಯುತ್ತೆ.
ಸ್ನೇಹಿತರೆ ನಿಮಗೆ ಇಲ್ಲಿ ಕೇವಲ ಮಸಾಲ ದೋಸೆ ಮಾತ್ರ ಸಿಗಲ್ಲ ಇಲ್ಲಿ ಕುಡಿದೋಸೆ ಬೆಣ್ಣೆ ದೋಸೆ ಮತ್ತು ಪ್ಲೇನ್ ದೋಸೆ ತುಂಬಾ ವೆರೈಟಿನಲ್ಲಿ ಸಿಗುತ್ತೆ ಇಲ್ಲಿ ದೋಸೆ. ಇದು ಪೂರ್ತಿ ವೆಜಿಟೇರಿಯನ್ ರೆಸ್ಟೋರೆಂಟ್ ಆಗಿರೋದ್ರಿಂದ ಇಲ್ಲಿ ಯಾವುದೇ ತರ ನಾನ್ ವೆಜ್ ಐಟಂಗಳು ಇಲ್ಲಿ ಯಾವುದೇ ಸಿಗಲ್ಲ.
ಇಡ್ಲಿ ವಡೆ (idli vade )
ಸ್ನೇಹಿತರೆ ನಿಮಗೆ ಇಲ್ಲಿ ಇಡ್ಲಿ ವಡೆ ಐಟಂ ನಲ್ಲಿ ಏನೇನು ಸಿಗುತ್ತೆ ಅಂತ ನಿಮಗೆ ತಿಳಿಸ್ತೀವಿ ನೋಡಿ. ಇಲ್ಲಿ ಇಡ್ಲಿ ವಡೆ ತುಂಬಾ ಫೇಮಸ್ ಆಗಿದೆ ಇಡ್ಲಿ ಜೊತೆಗೆ ನಿಮಗೆ ವಡೆ ಕೂಡ ಸಿಗುತ್ತೆ ಅದು ಜೊತೆಗೆ ಚಟ್ನಿ ಕೂಡ ಕೊಡ್ತಾರೆ ನಿಮಗೆ ಸ್ಪೆಷಲ್ ಆಗಿ ಏನಾದರೂ ಸಾಂಬಾರ್ ಬೇಕಂದ್ರೂ ಕೂಡ ದೊರೆಯುತ್ತದೆ.
ಇಲ್ಲಿ ನಿಮಗೆ ಎಷ್ಟು ರಕವಾದ ವಡೆಗಳು ಸಿಕ್ತಾ ಗೊತ್ತಾ ನಿಮಗೆ. ಅಲಸಂದೆ ವಡೆ, ಉದ್ದಿನ ವಡೆ, ಮದ್ದೂರ್ ವಡೆ ಇಷ್ಟು ರಕವಾದ ವಡೆಗಳು ಸಿಗ್ತವೆ ಸ್ನೇಹಿತರೆ ನಿಮಗೆ.
ಇಲ್ಲಿ ಮಸಾಲ ದೋಸೆ ಇಡ್ಲಿ ವಡೆ ಮತ್ತು ಗುಲಾಬ್ ಜಾಮೂನ್ ಬಿಸಿಬಿಸಿಯಾದ ಟಿ ಸಿಗುತ್ತೆ. ಮತ್ತೆ ಇಲ್ಲಿ ಎಷ್ಟು ನಿಮಗೆ ಕಾಸ್ಟ್ ಇರುತ್ತೆ ಅಂತ ಮೆನು ಪ್ರೈಸ್ ನೋಡೋಣ ಬನ್ನಿ.
ಇಲ್ಲಿ ಸಿಗುವ ಅಲ್ಪಹಾರ
- ಒಂದು ಸಿಂಗಲ್ ಇಡ್ಲಿ ಬಂದು ರೂ.10
- ಒಂದು ಸಿಂಗಿಲ್ ಹೊಡೆ ಬಂದು ಹತ್ತು ರೂಪಾಯಿ
- ಕೇಸರಿಬಾತು ಮತ್ತು ಖಾರಬಾತು 15 ರೂಪಾಯಿ
- ಮಸಾಲ ದೋಸೆ ಮತ್ತು ಚೋಚೋಬಾತು 25 ರೂಪಾಯಿ
- ಶಾವ್ಗೆ ಬಾತ್ ಬಂದು ರೂ.30
ಕಾಫಿ ಚಾಯಿ ಮತ್ತು ಜಿಂಜರ್ ಚಾಯ್ ಇದು ಎಲ್ಲಾ ರೂ.10
ಬಾದಾಮ್ ಕೋಲ್ಡ್ ಸಾಲಿಡ್ ಬಂದು ಮೂವತ್ತು ರೂಪಾಯಿ
ಇಲ್ಲಿ ಸಿಗುವ ಊಟ
- ಮೊಸರನ್ನ 25 ರೂಪಾಯಿ
- ರೈಸ್ ಬಾತ್ ರೂ.30
- ಬಜ್ಜಿ ಮತ್ತು ಪಕೋಡ ಅಥವಾ ಮದ್ದೂರು ವಡೆ ಬಂದು 20 ರೂಪಾಯಿ
- ಎರಡು ಚಪಾತಿ ಬಂದು 30 ರೂಪಾಯಿ ಎಕ್ಸ್ಟ್ರಾ ಬೇಕಂದ್ರೆ 8 ರೂಪಾಯಿ ಚಾರ್ಜ್ ಮಾಡ್ತಾರೆ
- ಮಜ್ಜಿಗೆ ಬಂದು 15 ರೂಪಾಯಿ
ಇಲ್ಲಿ ಕೊಂಬು ಊಟ ಸಿಗುತ್ತೆ
- ಕೊಂಬು ಒಂದು :-ಎರಡು ಚಪಾತಿ ಒಂದು ರೈಸ್ ಬಾತ್, ಅಥವಾ ಮೊಸರನ್ನ ಮಜ್ಜಿಗೆ ಇವೆಲ್ಲ ಸೇರಿ ರೂ.40
- ಕಂಭೋ 2 :-ಚಪಾತಿ ಮತ್ತು ರೈಸ್ ಬಾತ್ ಅಥವಾ ಮೊಸರನ್ನ ಬಜ್ಜಿ ಮತ್ತು ಮಜ್ಜಿಗೆ ಇವು ಎಲ್ಲಾ ಸೇರಿ 60 ರೂಪಾಯಿ
Timing ಕೆಲಸ ಸಮಯಗಳು :-
ಇಲ್ಲಿ ಅಲ್ಪಹಾರ ಬಂದು ಬೆಳಿಗ್ಗೆ 7:00 ಯಿಂದ ಮಧ್ಯಾಹ್ನ 12:30 ರವರೆಗೆ ಮತ್ತೆ ಸಾಯಂಕಾಲ 4:00 ಯಿಂದ ರಾತ್ರಿ ಹತ್ತು ಗಂಟೆವರೆಗೂ ಇರುತ್ತೆ.
ಊಟದ ಸಮಯ:- ಮಧ್ಯಾಹ್ನ 1:00 ಯಿಂದ ಸಾಯಂಕಾಲ 3:30ವರೆಗೂ ಇಲ್ಲಿ ಊಟ ಲಭ್ಯವಿರುತ್ತೆ.
ಮತ್ತೆ ಗ್ರಾಹಕರು ಏನು ಹೇಳುತ್ತಿದ್ದಾರೆ
ವಿಟ್ಟೋ ಕುಮಾರ್ ಗುಪ್ತ (vitto kumar gupta)
ವಿಟ್ಟೋ ಕುಮಾರ್ ಗುಪ್ತ ಅವರು ಏನು ಹೇಳುತ್ತಿದ್ದಾರೆ ಅಂದ್ರೆ ನಾನು ನಾರ್ತ್ ಇಂಡಿಯನ್ ತಾಲಿ ಪ್ರಯತ್ನ ಮಾಡಿದ್ದೆ. ಲೀ ರೇಟುಗೆ ತಟ್ಟಗೆ ಊಟ ದೊರೆಯುತ್ತದೆ ಅಂತ ಅವರು ಸ್ಪಷ್ಟಪಡಿಸುತ್ತಿದ್ದಾರೆ. ಇಲ್ಲಿ ತುಂಬಾ ನೀಟ್ನೆಸ್ ಮತ್ತು ಕ್ಲೀನ್ ಆಗಿರುತ್ತೆ, ಟೇಸ್ಟ್ ಕೂಡ ಚೆನ್ನಾಗಿರುತ್ತೆ ಅಂತ ಹೇಳ್ತಿದ್ದಾರೆ.
ರಾಜ ಕಿರಣ್ :- ನಾನು ಇಲ್ಲಿ ಜಮಾಟನಲ್ಲಿ ಆಟೋ ಮಾಡಿದ್ದೆ ಈಗ ಹೋಟೆಲ್ ನಿಂದ. ಇಡ್ಲಿ ವಡೆ ಮತ್ತು ಮಸಾಲ ದೋಸೆ ಅಕ್ಕಿ ರೊಟ್ಟಿ ಇಲ್ಲಿ ತುಂಬಾ ಚೆನ್ನಾಗಿರುತ್ತವೆ ಇಲ್ಲಿ ರೊಟ್ಟಿಗೆ ಬರುವ ಜಾಸ್ತಿ ಇರುತ್ತೆ. ಇಲ್ಲಿ ರೇಟ್ ಗೆ ತಗ್ಗಟ್ಟಗೆ ಕ್ವಾನ್ಟಿಟಿ ಕೂಡ ಚೆನ್ನಾಗಿ ಸಿಗುತ್ತೆ ಅಂತ ಇವರು ಹೇಳುತ್ತಿದ್ದಾರೆ.
ಇಲ್ಲಿ ನಾಲ್ಕು ಜನಕ್ಕೆ ಸುಮಾರು 360 ಆಗಬಹುದು ಅಂತ ಹೇಳ್ತಿದ್ದಾರೆ.
ಸ್ನೇಹಿತರೆ ನೀವು ಯಾವಾಗ ಟ್ರೈ ಮಾಡ್ತೀರಾ ಈ ನಮಸ್ತೆ ತಿಂಡಿ ಮನೆಯನ್ನು ನೀವು ಅಲ್ಪಹಾರ ಪ್ರೇಮಿಗಳು ಆಗಿದ್ದರೆ ಒಂದು ಸಾರಿ ಈ ನಮಸ್ತೆ ರೆಸ್ಟೋರೆಂಟ್ ಗೆ ಭೇಟಿ ನೀಡಿ. ನಿಮಗೆ ಇಷ್ಟವಾದ ರುಚಿಗಳನ್ನು ಒಂದು ಸಾರಿ ಟ್ರೈ ಮಾಡಿ ಚೆನ್ನಾಗಿರುತ್ತೆ ಅಂತ ನನ್ನ ಅನಿಸಿಕೆ.