Kupseppu : ನೀರುಳ್ಳಿ ತೋಪ್ಳು ನಿಂದ ಕುಪ್ಸೆಪ್ಪು ಮಾಡೋದು ಹೇಗೆ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ಅಡುಗೆ ಸರನ್ನು ನೀವು ಯಾವತಾರ ಮಾಡೋದು ಅಂತ ತಿಳಿಸಿ ಕೊಡ್ತೀನಿ ಬನ್ನಿ. ನೀವು ಒಂದೇ ತರವಾದ ಸಾರು ಗಳನ್ನು ತಿಂದು ಬೇಜಾರ ಹಾಗಿದ್ರೆ ಮತ್ತೆ ನೀವು ಇದನ್ನ ಮತ್ತೆ ಬಿಡುವುದಿಲ್ಲ.

Kupseppu, nirulli thoplu, village style recepy, amarapuram

ಮೇಲೆ ನೋಡ್ತಾ ಇದ್ದಿರಲ್ಲ ಫ್ರೆಂಡ್ಸ್ ಇದೆ ಕುಪ್ಸೆಪ್ಪು ಮಾಡೋದ್. ಇದು ತುಂಬಾ ಚನ್ನಾಗಿ ಇರುತ್ತೆ. ಅದು ರಾಗಿ ಮುದ್ದೆ ಇದ್ರ್ ಜೊತೆಗೆ ಇದ್ರೆ ನೀವು ಪ್ರತಿದಿನ ಇದನ್ನ ಬಿಡುವುದಿಲ್ಲ. ಅಷ್ಟು ರುಚಿಯಾಗಿ ಇರುತ್ತೆ.

ಮತ್ತೆ ಈ ಸರನ್ನ ನಾವು ಯಾವತ್ತೂ ಮಾಡಿ ಇಲ್ವಾ ಮತ್ತೆ ಹೇಗೆ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದಿರ. ಅಷ್ಟೊಂದು ಯೋಚನೆ ಮಾಡುವ ಅಗತ್ಯ ಇಲ್ಲ ಯಾಕೆ ಅಂದ್ರೆ ಇದನ್ನ ಮಾಡೋಕೆ ಜಾಸ್ತಿ ಬೇಕಿಲ್ಲ.

ಕುಪ್ಸೆಪ್ಪು (kupseppu ) ಮಾಡೋಕೆ ಏನು ಬೇಕು?

Kupseppu, nirulli thoplu, village style recepy, amarapuram

  1. ನೀರುಳ್ಳಿ ತೋಪ್ಳು
  2. ನೀರುಳ್ಳಿ
  3. ಟೊಮೊಟೊ
  4. ಹಸಿ ಮೆಣಸಿನಕಾಯಿ
  5. ಬೆಳ್ಳುಳ್ಳಿ
  6. ಧನಿಯಾ ಪುಡಿ
  7. ಶೇಂಗಾ ಪುಡಿ

Kupseppu ಮಾಡುವ ವಿಧಾನ :


ಮೇಲೆ ಹೇಳಿರುವ ಪ್ರತಿಯೊಂದು ಐಟಂ ನನ್ನು ತಕೊಂಡು. ನೀರುಳ್ಳಿ ತೋಪ್ಲಾಂನ್ನು ಚನ್ನಾಗಿ ಚಿಕ್ಕದಾಗಿ ಕಟ್ ಮಾಡ್ಕೋಬೇಕು. ಆಮೇಲೆ ಇದ್ರ ಜೊತೆಗೆ ನೀರುಳ್ಳಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಲ್ಲ ಜೊತೆಗೆ ಇಟ್ಕೋಬೇಕು.

ಓಲೆ ಮೇಲೆ ಒಂದು ಪಾತ್ರೆ ಇಟ್ಕೊಂಡು ಅದ್ರಲ್ಲಿ ಎಲ್ಲಾ ಐಟಂ ಗಳನ್ನ ಒಂದೇ ಸಲ ಹಾಕ್ಬೇಕು. ಆಮೇಲೆ ಅದಕ್ಕೆ ತಕ್ಕಾಗಿ ಸ್ವಲ್ಪ ನೀರು ಹಾಕ್ಬೇಕು.

ಇನ್ನೊಂದು ಹತ್ತು ನಿಮಿಷ ಒಳಗಡೆ ಪಾತ್ರೆ ಯನ್ನು ಇಳಿಸ್ತಿವಿ ಅನ್ನೋ ಸಮಯದಲ್ಲಿ ಸೇಂಗಾ ಪುಡಿ ಹಾಕ್ಬೇಕು. ಆಮೇಲೆ ಒಂದು ಹತ್ತು ನಿಮಿಷ ಆದ್ಮೇಲೆ ಇಳಿಸಬೇಕು.

Kupseppu, nirulli thoplu, village style recepy, amarapuram


ಇವಾಗ ಕುಪ್ಸೆಪ್ಪು ಚನ್ನಾಗಿ ರೆಡಿ ಆಗಿದೆ. ಸ್ವಲ್ಪ ಈ ಸರನ್ನು ಹಾಕ್ಕೊಂಡು ಮುದ್ದೆ ಯಲ್ಲಿ ತಿಂದ್ರೆ ಅಹ್ ಅದು ಸ್ವರ್ಗ ಗುರು. ಅಷ್ಟು ಚನ್ನಾಗಿ ರುಚಿಯಾಗಿ ಇರುತ್ತೆ.

ನೀವು ಒಂದು ಸಲ ಟ್ರೈ ಮಾಡಿ. ಹಳ್ಳಿ ಶೈಲಿಯಲ್ಲಿ ಈ ಸರುಗಳು ತುಂಬಾ ಟೇಸ್ಟ್ ಗೆ ಇರ್ತವೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post